ವಿದ್ಯುತ್ ಪರಿವರ್ತಕವಿದ್ದ ಕಂಬ ಏರಿದ ವ್ಯಕ್ತಿಗೆ ವಿದ್ಯುತ್ ಆಘಾತ, ಬೆಂಕಿಯಲ್ಲಿ ಬೆಂದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು

ಹಾಸನ: ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದಲ್ಲಿ ಅನಧಿಕೃತವಾಗಿ ಸೆಸ್ಕ್ ಟ್ರಾನ್ಸ್‌ಫರ್ಮರ್ ಕಂಬ ಏರಿದ ಲಕ್ಷ್ಮಣ್ (40) ಎಂಬ ವ್ಯಕ್ತಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟ್ರಾನ್ಸ್‌ಫಾರ್ಮರ್ ಪೆಟ್ಟಿಗೆಯಲ್ಲಿ ಬೆಂಕಿ ಹೊತ್ತಿಕೊಂಡು ನರಳಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೆಂಕಿಯಿಂದ ತೀವ್ರ ಗಾಯ: ವಿದ್ಯುತ್ ಶಾಕ್‌ನಿಂದ ಲಘು ಹೊತ್ತಿ, ಲಕ್ಷ್ಮಣ್ ತೀವ್ರವಾಗಿ ಗಾಯಗೊಂಡು ಕಂಬದಲ್ಲಿ ನೇತಾಡುತ್ತಿದ್ದರು. ಸ್ಥಳೀಯರು ಅಸಹಾಯಕರಾಗಿ ನಿಂತು ನರಳಾಟವನ್ನು ನೋಡುತ್ತಿದ್ದರು. ಸುದ್ದಿ ತಿಳಿದ ಕೆಇಬಿ ಸಿಬ್ಬಂದಿ ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರು.

ರಕ್ಷಣೆ ಮತ್ತು ಚಿಕಿತ್ಸೆ: ಸ್ಥಳಕ್ಕೆ ತಕ್ಷಣ ಧಾವಿಸಿದ ಸೆಸ್ಕ್ ಸಿಬ್ಬಂದಿ, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುವ ಲಕ್ಷ್ಮಣ್ ಅವರನ್ನು ಏಣಿ ಮೂಲಕ ಕೆಳಗಿಳಿಸಿ, ಪ್ರಾಥಮಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪೊಲೀಸರಿಂದ ಪರಿಶೀಲನೆ: ಈ ಘಟನೆ ಬಗ್ಗೆ ಸಕಲೇಶಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.