ಸ್ವಿಫ್ಟ್-ಸ್ಯಾಂಟ್ರೊ ಮುಖಾಮುಖಿ ಡಿಕ್ಕಿ; ಓರ್ವ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

ಹಾಸನ: ಸ್ವಿಫ್ಟ್ ಹಾಗೂ ಸ್ಯಾಂಟ್ರೋ‌ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವಿಗೀಡಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೇಲೂರು ತಾಲ್ಲೂಕಿನ, ಹೊಸನಗರ ಸಮೀಪ‌ ನಡೆದಿದೆ.

ಬೇಲೂರು ತಾಲ್ಲೂಕಿನ, ಐರವಳ್ಳಿ ಗ್ರಾಮದ ಮನೋಜ್ (27) ಮೃತ ಯುವಕ, ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಕಿಶನ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮನೋಜ್

KA-18 N-4120 ನಂಬರ್‌ನ ಸ್ಯಾಂಟ್ರೋ‌ಕಾರು ಹಾಗೂ KA-13 N-2768 ನಂಬರ್‌ನ ಸ್ವಿಫ್ಟ್ ಕಾರುಗಳು ಹೊಸನಗರದ ಸಮೀಪ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿವೆ. ಗಾಯಾಳುವಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಜಖಂಗೊಂಡಿರುವ ಸ್ವಿಫ್ಟ್ ಕಾರು

ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಅಪಘಾತಕ್ಕೊಳಗಾದ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.