ಬೈಕ್-ಬೊಲೆರೋ ಮುಖಾಮುಖಿ ಡಿಕ್ಕಿ: ತಲೆಬುರುಡೆ ಒಡೆದು ರಸ್ತೆಗೆ ಬಿದ್ದ ಸವಾರನ ಮಿದುಳು

ಹಾಸನ : ಬೈಕ್ ಹಾಗೂ ಬೊಲೆರೋ ಪಿಕಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ‌ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೇಲೂರು ತಾಲ್ಲೂಕಿನ ಹಳೇಬೀಡಿನ ಕೆರೆ ಏರಿ ಮೇಲೆ ನಡೆದಿದೆ.

ಹಳೇಬೀಡು ಹೋಬಳಿ ಗಟ್ಟದಹಳ್ಳಿ ಗ್ರಾಮದ ದಿನೇಶ್ (26) ಮೃತ ಯುವಕ. ಹಳೇಬೀಡಿನಿಂದ ಗಟ್ಟದಹಳ್ಳಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಿನೇಶ್ ಗೆ ಹಳೇಬೀಡು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಯಿತು.

ಡಿಕ್ಕಿ ರಭಸಕ್ಕೆ ದಿನೇಶ್ ತಲೆಬುರುಡೆ ಒಡೆದು ಮಿದುಳು ರಸ್ತೆಗೆ ಬಿದ್ದಿದೆ. ಹಳೇಬೀಡು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.