ಹಾಸನ : ಅಕ್ರಮವಾಗಿ ಮರ ಕಡಿದ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಹೊತ್ತ ಅರಣ್ಯ ಇಲಾಖೆ ಅಧಿಕಾರಿ ಅಮಾನತುಗೊಂಡಿದ್ದಾರೆ.
ಅರಕಲಗೂಡು ಪ್ರಾದೇಶಿಕ ವಲಯದ ಮಲ್ಲಿಪಟ್ಟಣದ ಶಾಖಾ ಕಚೇರಿಯ ಡಿಆರ್‌ಎಫ್‌ಓ ಕೆ.ಎನ್. ರಘು ಅಮಾನತುಗೊಂಡವರು.
ಅರಣ್ಯಾಧಿಕಾರಿ ರಘು ವಾಸವಿರುವ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಳೆದಿದ್ದ ಬೆಲೆ ಬಾಳುವ ಹೊನ್ನೆ, ನಂದಿ, ತೇಗದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿತ್ತು.
ಈ ಬಗ್ಗೆ ಡಿಆರ್‌ಎಫ್ಓ ರಘು ವಿಚಾರಣೆ ಮಾಡಿದ್ದ ಹಿರಿಯ ಅಧಿಕಾರಿಗಳ ಬಳಿ ಹೇಳಿಕೆ ನೀಡುವಾಗ ಅಕ್ರಮವಾಗಿ ಮರಗಳನ್ನು ಕಡಿದಿಲ್ಲ ಎಂದು ತನಿಖೆಯ ದಿಕ್ಕು ತಪ್ಪಿಸಿದ್ದರು.
ಬೇರೆ ಶಾಖೆಯ ಸಿಬ್ಬಂದಿಗಳಿಂದ ತನಿಖೆ ನಡೆಸಿದಾಗ ಅಕ್ರಮವಾಗಿ ಮರ ಕಡಿಯುವಲ್ಲಿ ರಘು ಶಾಮೀಲಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.