ಪ್ರಜ್ವಲ್ ರೇವಣ್ಣ ಕೇಸ್: ಸಾಕ್ಷ್ಯ ಸಂಗ್ರಹಕ್ಕಾಗಿ ಎಂಪಿ ನಿವಾಸಕ್ಕೆ ಆಗಮಿಸಿದ ಫೋರೆನ್ಸಿಕ್ ತಜ್ಞರ ತಂಡ

ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ಸಂಗ್ರಹಕ್ಕಾಗಿ ಘಟನೆ ನಡೆದಿದೆ ಎನ್ನಲಾದ ನಗರದ ಸಂಸದರ ನಿವಾಸಕ್ಕೆ ಎಫ್‌ಎಸ್ಎಲ್ ತಂಡ ಆಗಮಿಸಿದೆ.

ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸಕ್ಕೆ ಹಾಕಿದ್ದ ಬೀಗವನ್ನು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ತೆರೆದು ಎಫ್‌ಎಸ್‌ಎಲ್ ತಂಡ‌ ಒಳಪ್ರವೇಶಿಸಿ ಸಾಕ್ಷ್ಯಕ್ಕಾಗಿ ಹುಡುಕಾಟ ಆರಂಭಿಸಿದೆ.

ಎಂಪಿ ಕ್ವಾರ್ಟರ್ಸ್ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಎಸ್ಐಟಿ ತಂಡ ಸಂತ್ರಸ್ತೆಯ ಸ್ಥಳ ಮಹಜರು ಮಾಡಿದೆ.