ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಅಮಾನಿಕೆರೆ ಬಳಿ ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ-ಮಗ ಮೃತಪಟ್ಟು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಕೇಶ್ (28), ಮೋಕ್ಷಿತ್‌ಗೌಡ (8) ಮೃತರು. ಮೂವರು ಚವರ್‌ಲೆಟ್ ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಶ್ರವಣೇರಿ ಗ್ರಾಮಕ್ಕೆ ತೆರಳುತ್ತಿದ್ದರು.
ಅಮಾನಿಕೆರೆ ಬಳಿ ಹೋಗುತ್ತಿದ್ದಾಗ ಬ್ರೇಕ್ ಫೇಲ್ ಆಗಿ ಎದುರುಗಡೆಯಿಂದ ಬರುತ್ತಿದ್ದ ಐ ಟೆನ್ ಕಾರಿಗೆ ಡಿಕ್ಕಿಯಾಗಿ ನಂತರ ಮರಕ್ಕೆ ಹೊಡೆದಿದೆ. ಅಪಘಾತದ ಗಂಭೀರತೆಗೆ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಕೇಶ್ ಅವರ ಪತ್ನಿ ಆಶಾಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.