ಯುವ ರೈತನ ಬಲಿ ಪಡೆದ ರಾಜ್ಯ ಸರ್ಕಾರದ ಕತ್ತಲೆ ಕರೆಂಟ್: ಹಾವು ಕಚ್ಚಿ ರೈತ ಸಾವು!

ಹಾಸನ: ಪಂಪ್ ಸೆಟ್ ಗಳಿಗೆ ರಾತ್ರಿ ವೇಳೆ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಸುವ ಕ್ರಮ ಯುವ ರೈತನೊಬ್ಬನನ್ನು ಬಲಿ ಪಡೆದಿದೆ.

ಹೊಳೆನರಸೀಪುರ ತಾಲ್ಲೂಕಿನ, ದೇವರಗುಡ್ಡನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಆರು ಗಂಟೆಗೆ ಪಂಪ್ ಸೆಟ್ ಚಾಲನೆ ಮಾಡಲೆಂದು ಜಮೀನಿಗೆ ಹೋಗಿದ್ದ ಅಭಿಲಾಷ್ (30) ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.
ಸಂಜೆ ಆರು ಗಂಟೆಗೆ ಪಂಪ್‌ಸೆಟ್‌ಗೆ ತ್ರೀಫೇಸ್ ವಿದ್ಯುತ್ ನೀಡಿದ ಹಿನ್ನೆಲೆಯಲ್ಲಿ ರಾಗಿಗೆ ನೀರು ಹಾಯಿಸಲು ತೆರಳುತ್ತಿದ್ದ ಅಭಿಲಾಷ್ ಅವರಿಗೆ ಹಾವು ಕಡಿದಿತ್ತು.

ಸ್ಥಳದಲ್ಲೇ ಕುಸಿದು ಬಿದ್ದಿದ್ದ ಅವರನ್ನು ಸ್ಥಳೀಯರು ಹಳ್ಳಿಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು.
ಸ್ಥಳಕ್ಕೆ ಹಳ್ಳಿಮೈಸೂರು ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.