ರೋಲಿಂಗ್ ಶೆಟರ್ ಮುರಿಯಲಿಲ್ಲ, ಬೈಕ್ ಹ್ಯಾಂಡಲ್ ಲಾಕ್ ತಿರುಗಲೂ ಇಲ್ಲ: ಕುಡುಕ ಕಳ್ಳನ ವ್ಯರ್ಥ ಸಾಹಸ ಸಿಸಿಟಿವಿಯಲ್ಲಿ ಸೆರೆ

ಹಾಸನ: ನಗರದ ಉತ್ತರ ಬಡಾವಣೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅಂಗಡಿಯ ರೋಲಿಂಗ್ ಶಟರ್ ಮುರಿಯಲು ಮತ್ತು ಬೈಕ್ ಕದಿಯಲು ಯತ್ನಿಸಿ ಸುಸ್ತಾಗಿ ಖಾಲಿ ಕೈನಲ್ಲಿ ಮರಳಿದ್ದು, ಆತನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂದಾಜು 60 ವರ್ಷದ ವ್ಯಕ್ತಿ ಉತ್ತರ ಬಡಾವಣೆಯ ರಚನಾ ಅಕಾಡೆಮಿ ಮತ್ತು ಸ್ಟುಡಿಯೋ ಹತ್ತಿರ ರೋಲಿಂಗ್ ಶಟರ್ ಓಪನ್ ಮಾಡಲು ಶತಾಯಗತಾಯ ಪ್ರಯತ್ನಿಸಿದರೂ ವಿಫಲನಾದ. ಇದಾದ ಬಳಿಕ ಅಲ್ಲೇ ನಿಂತಿದ್ದ ಬೈಕ್‌ ಅನ್ನು ಕದಿಯಲು ಯತ್ನಿಸಿದರೂ ಅನ್‌ಲಾಕ್ ಮಾಡಲು ಆಗಿಲ್ಲ. ಇದರಿಂದ ದಿಕ್ಕುತೋಚದೆ ವಾಪಾಸ್ ಹೋದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ.