ಹಿಮ್ಸ್ ಆಸ್ಪತ್ರೆ ವೈದ್ಯರು ಮೆಹೆಂದಿ ತರುವಂತೆ ಔಷಧ ಚೀಟಿ ಬರೆದುಕೊಟ್ಟರೆ?

ಶಸ್ತ್ರಚಿಕಿತ್ಸೆ ಮಾಡಬೇಕಾದ ಸ್ಥಳ ಗುರುತಿಸಲು ಮೆಹೆಂದಿ ಬಳಕೆ| ಔಷಧ ಚೀಟಿಯಲ್ಲಿ ಬರೆದಿದ್ದರಿಂದ ವೈರಲ್ ಆಗಿದ್ದ ಪ್ರಿಸ್ಕ್ರಿಪ್ಷನ್

ಹಾಸನ: ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಗೆ ಮೆಹಂದಿ ಕೋನ್ ತರುವಂತೆ ಪ್ರಿಸ್ಕ್ರಿಪ್ಷನ್ ಚೀಟಿ ಬರೆದುಕೊಟ್ಟಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಹೆಂದಿ ಕೋನ್ ನಿಂದ ಯಾವ ಚಿಕಿತ್ಸೆ ನೀಡುತ್ತಾರೆ ಎಂಬ ಪ್ರಶ್ನೆಯೊಂದಿಗೆ ಹಿಮ್ಸ್ ತೆರಳಿದಾಗ ಸಿಬ್ಬಂದಿಯ ಸಣ್ಣ ನಿರ್ಲಕ್ಷ್ಯ ಇದಕ್ಕೆಲ್ಲ ಕಾರಣ ಎನ್ನುವುದು ಗೊತ್ತಾಗಿದೆ.

ಹಿಮ್ಸ್ ನ ಸರ್ಜರಿ ವಿಭಾಗದ ಪ್ರಿನ್ಕ್ರಿಪ್ಷನ್ ಚೀಟಿಯಲ್ಲಿ ಒಂದು ಮೆಹೆಂದಿ ಕೋನ್ ಹಾಗೂ ಎರಡು ಕ್ರೇಪ್ ಬ್ಯಾಂಡೇಜ್ ತರುವಂತೆ ಬರೆದುಕೊಡಲಾಗಿತ್ತು. ಕಾಲು ಮೂಳೆ ಮುರಿದು ಬ್ಯಾಂಡೇಜ್ ಹಾಕಿಕೊಂಡಿದ್ದ ವೃದ್ಧೆ ಅದನ್ನು ಹುಡುಕಿಕೊಂಡು ಮೆಡಿಕಲ್ ಶಾಪ್, ಬ್ಯಾಂಗಲ್ ಸ್ಟೋರ್ ಅಲೆಯುತ್ತಿದ್ದಾಗ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್ ಅವರಿಗೆ ದೊರಕಿದ್ದರಿಂದ ಅವರು ಆ ಚೀಟಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಬೇಸರವನ್ನೂ ಹೊರ ಹಾಕಿದ್ದರು.

ಇದೇಕೆ ಹೀಗೆ ಎಂದು ‘ಕನ್ನಡ ಪೋಸ್ಟ್’ ಹಿಮ್ಸ್ ನ ಸರ್ಜರಿ ವಿಭಾಗಕ್ಕೆ ತೆರಳಿ ಪ್ರಶ್ನಿಸಿದಾಗ ಅಲ್ಲಿನ ವೈದ್ಯರು ನೀಡಿದ ಸ್ಪಷ್ಟನೆ ಹೀಗಿದೆ.

ಈ ಮೇಲ್ಕಂಡ ಪ್ರಿಸ್ಕ್ರಿಪ್ಷನ್ ನಲ್ಲಿ ಬರೆದಿರುವುದನ್ನು ಡಾಕ್ಟರ್ಗಳು ವೆರಿಕೋಸ್ ವೈನ್ಸ್ ಎಂಬ ಕಾಯಿಲೆಯ ಶಸ್ತ್ರಚಿಕಿತ್ಸೆಯಲ್ಲಿ ಇನ್ಕಾಂಪೀಟೆಂಟ್ ಪರ್ಫೋರೇಟರ್ (incompetent perforators) ಇದನ್ನು ಗುರುತು ಮಾಡುವುದಕ್ಕಾಗಿ ಬಳಸಲಾಗುವುದು.

ಒಂದುವೇಳೆ ಈ ಜಾಗವನ್ನು ಆಪರೇಷನ್ ಗೂ ಮುನ್ನ ದಿನನಿತ್ಯ ಬಳಸುವ ಪೆನ್ನಿನ ಇಂಕ್ ನಲ್ಲಿ ಗುರುತು ಮಾಡಿದಲ್ಲಿ, ಶೇ 100ಕ್ಕೆ 100 ರಷ್ಟು ಅಳಿಸಿ ಹೋಗುವುದು ಖಚಿತ. ಏಕೆಂದರೆ ಶತ್ರಚಿಕಿತ್ಸೆಯ ಸಮಯದಲ್ಲಿ ಹಾಗೂ ಅದಕ್ಕೆ ಮುನ್ನ ಆಪರೇಷನ್ ಮಾಡುವ ಜಾಗವನ್ನು ಬೀಟಾಡಿನ್ (betadine) ಮತ್ತು ಸ್ಪಿರಿಟ್ ನಿಂದ ಸ್ಕ್ರಬ್ /ಶುಚಿ ಗೊಳಿಸಲಾಗುವುದು.

ಆದ್ದರಿಂದ ಸ್ಥಳೀಯ ವಸ್ತುಗಳು – ಮೇಹಂದಿ/ಹೆನ್ನಾ ಇವುಗಳಿಂದ ಗುರುತಿಸಿದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಉಳಿಯುತ್ತದೆ ಹಾಗು ಸ್ಕ್ರಬ್ಬಿಂಗ್( scrubbing with betadine and spirit ) ನಿಂದ ಅಳಿಸಿ ಹೋಗುವುದಿಲ್ಲ. ಗುರುತು ಮಾಡಿರುವ ಜಾಗದಲ್ಲಿ ಡಾಕ್ಟರ್ಗಳು ಸುಲಭವಾಗಿ ಪರ್ಫೋರೆಟಾರ್ಗಳನ್ನು (perforator) ಹುಡುಕುವಲ್ಲಿ ಸಹಾಯ ಮಾಡುತ್ತದೆ.

ಆದ್ದರಿಂದ, ಈ ಪ್ರಿಸ್ಕ್ರಿಪ್ಷನ್ ನಲ್ಲಿ ಇರುವ ಮೆಹಂದಿಯನ್ನು ವೈದ್ಯಕೀಯ ಕಾರಣಗಳಿಗಾಗಿ ಉಪಯೋಗಿಸಲಾಗುವುದು.

ಹಿಮ್ಸ್ ಆಸ್ಪತ್ರೆ ದಾದಿ  ಔಷಧ ಚೀಟಿಯಲ್ಲಿ ಮೆಹೆಂದಿ ಕೋನ್ ಪ್ರಿನ್ಕ್ರಿ್ಪ್ಷನ್ ಬರೆದುಕೊಟ್ಟಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿರುವ ಬಗ್ಗೆ ಸರ್ಜರಿ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದೇನೆ. ವೆರಿಕೋಸ್ ವೇಯಿನ್ ಶಸ್ತ್ರಚಿಕಿತ್ಸೆ ಸ್ಥಳ ಗುರುತಿಸಲು ಮೆಹೆಂದಿಯನ್ನು ಬಳಸುತ್ತಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ರೋಗಿಯ ಕಡೆಯವರಿಗೆ ಅದನ್ನು ತರಲು ಅಲ್ಲಿನ ಸಿಬ್ಬಂದಿ ಔಷಧಿ ಚೀಟಿಯಲ್ಲಿ ಬರೆದುಕೊಟ್ಟಿರುವುದು ಗಮನಕ್ಕೆ ಬಂದಿದೆ. ವೃದ್ಧೆ ಮೂಳೆ ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ಪಡೆದಿಲ್ಲ. ಅವರ ಕಾಲಿನ ಮೂಳೆಯೂ ಮುರಿದಿಲ್ಲ. ಮೆಹೆಂದಿಯಂತಹ ವಸ್ತು ತರಿಸುವ ಬಗ್ಗೆ ವಿಭಾಗದ ವೈದ್ಯರಿಗೆ ಸೂಕ್ತ ಸೂಚನೆ ನೀಡಲಾಗಿದೆ.
ಡಾ.ಎಸ್.ವಿ.ಸಂತೋಷ್, ನಿರ್ದೇಶಕರು, ಹಿಮ್ಸ್.