ವಿಡಿಯೋ: ಕೂಲಿ ಕಾರ್ಮಿಕರನ್ನು ಅಟ್ಟಾಡಿಸಿದ ದೈತ್ಯ ಕಾಡಾನೆ ಭೀಮ!

ಹಾಸನ, ಮಾರ್ಚ್ 19:  ಬೇಲೂರು ತಾಲ್ಲೂಕಿನ ಬಕ್ರವಳ್ಳಿ ಗ್ರಾಮದಲ್ಲಿ  ಕಾಡಾನೆ ಭೀಮ, ಕೂಲಿ ಕಾರ್ಮಿಕರನ್ನು ರಸ್ತೆಯಲ್ಲೇ ಅಟ್ಟಾಡಿಸಿದ ಆತಂಕಕಾರಿ ಘಟನೆ ನಡೆದಿದೆ.

ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ಕಿಸಿ

ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಅಸ್ಸಾಂ ಮೂಲದ ತೋಟ ಕಾರ್ಮಿಕರು ಸಾಗುತ್ತಿದ್ದ ರಸ್ತೆಗೆ ಬಂದು ನಿಂತ ಭೀಮ ಕಾಡಾನೆ ಅವರ ಬೆನ್ನು ಹತ್ತಿದೆ. ತಮ್ಮನ್ನು ಆನೆ ಅಟ್ಟಿಸಿಕೊಂಡು ಬಂದಿದ್ದನ್ನು ಕಂಡು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಭಯಭೀತರಾಗಿ ಜೀವ ಕೈಯಲ್ಲಿ ಹಿಡಿದು ಓಡಿ ತಪ್ಪಿಸಿಕೊಂಡಿದ್ದಾರೆ.

ಓಡುವಾಗ ಒಬ್ಬ ತಂದೆ ತನ್ನ ಮಗುವನ್ನು ಎತ್ತಿಕೊಂಡು ಪ್ರಾಣ ರಕ್ಷಣೆಗಾಗಿ ಓಡಿದ ದೃಶ್ಯ ಹೃದಯ ಕಲಕುವಂತಿತ್ತು. ಕಾಡಾನೆ ಕಂಡು ಭಯಗೊಂಡ ಕಾರ್ಮಿಕರು ಓಡೋಡಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.