ಪ್ರಿಯಕರನಿಗೆ ಚಾಕು ಇರಿತ ಪ್ರಕರಣ; ಯುವತಿಗೆ 14 ದಿನಗಳ ನ್ಯಾಯಾಂಗ ಬಂಧನ

ಹಾಸನ: ಹೊಸ ವರ್ಷಾಚರಣೆಯ ವೇಳೆ
ಪ್ರಿಯಕರನಿಗೆ ಚಾಕು ಇರಿದಿದ್ದ ಪ್ರಕರಣದ ಆರೋಪಿ ಭವಾನಿಗೆ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಗುರುವಾರ ಭವಾನಿಯನ್ನು ಬಂಧಿಸಿದ್ದ ಬಡಾವಣೆ ಪೊಲೀಸರು ವಿಚಾರಣೆ ನಡೆಸಿ ರಾತ್ರಿ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ನ್ಯಾಯಾಧೀಶರು ಆದೇಶಿಸಿದರು. ಪೊಲೀಸರು ಆರೋಪಿಯನ್ನು ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರು‌

ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಜ.31 ರಂದು ತಡರಾತ್ರಿ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದ ಪ್ರಿಯಕರನ ಮೇಲೆ ಆರೋಪಿ ಭವಾನಿ ಚಾಕುವಿನಿಂದ ದಾಳಿ ನಡೆಸಿದ್ದಳು.