ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಮಲ್ಲವನಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂ. ಅನುದಾನದ ಚೆಕ್‌ನ್ನು ಬುಧವಾರ ವಿತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ
ಕೇಶವ ದೇವಾಂಗ ಮಾತನಾಡಿ, ಸಹಕಾರ ಸಂಘದ ಸದಸ್ಯರು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಏಳಿಗೆಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಹೈನುಗಾರಿಕೆ ಮೂಲಕ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಬೇಕು. ಸಾಮರಸ್ಯದ ಜೀವನಕ್ಕೆ ಎಲ್ಲಾ ಗ್ರಾಮಸ್ಥರು ಕೈಜೋಡಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಎಲ್ಲಾ ಗ್ರಾಮದ ದೇವಸ್ಥಾನ ಹಾಗೂ ಹಾಲಿನ ಡೇರಿಗಳಿಗೆ ಸಹಾಯ ಧನವನ್ನು ನೀಡುತ್ತಾ ಬಂದಿದೆ ಎಂದರು.
ಶ್ರವಣಬೆಳಗೂಳ ಯೋಜನಾ ಕಚೇರಿಯ ಯೋಜನಾಧಿಕಾರಿ ಸದಾಶಿವ್ ಕುಲಾಲ್, ಶೆಟ್ಟಹಳ್ಳಿ ವಲಯ ಮೇಲ್ವಿಚಾರಕ ಸುರೇಶ್‌ಗೌಡ, ಮಲ್ಲನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ಒಕ್ಕೂಟದ ಅಧ್ಯಕ್ಷ ದೀಪ್, ಶ್ರವಣಬೆಳಗೊಳ ಜ್ಞಾನ ವಿಕಾಸ ಸಮನ್ವಯಧಿಕಾರಿ ಸ್ವಾತಿ ನಾಗೇಶ್, ಮಲ್ಲವನಘಟ್ಟ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹೇಮಲತಾ ಸೇರಿದಂತೆ ಇತರರು ಹಾಜರಿದ್ದರು.