ಸರಪಳಿಯಲ್ಲಿ ಬಂಧಿಯಾದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕ; ಕರೆತಂದವರು ಯಾರು?

ರಸ್ತೆ ಬದಿ ಮೌನವಾಗಿ ಕುಳಿತಿದ್ದ ಬಾಲಕ

ಹಾಸನ: ಸಕಲೇಶಪುರ ತಾಲ್ಲೂಕಿನ, ಕ್ಯಾನಳ್ಳಿ ಬಳಿ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಬಾಲಕನೊಬ್ಬ ಪತ್ತೆಯಾಗಿದ್ದಾನೆ.

ಕಬ್ಬಿಣದ ಚೈನ್‌ನಿಂದ ಬಂಧಿಯಾಗಿರುವ ಸುಮಾರು 10 ವರ್ಷ ವಯಸ್ಸಿನ ಬಾಲಕ ರಸ್ತೆ ಬದಿಯಲ್ಲಿ ಒಬ್ಬನೇ ಕುಳಿತಿದ್ದನು.

ಅದನ್ನು ಕಂಡು ಪ್ರಶ್ನಿಸಿದ ಸ್ಥಳೀಯರೊಂದಿಗೆ ಬಾಲಕ ಏನನನ್ನೂ ಮಾತನಾಡಿಲ್ಲ. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಾಲಕನನ್ನು ರಕ್ಷಿಸಿ ಕರೆದೊಯ್ದಿದ್ದಾರೆ.

ಬಾಲಕ ಯಾರು? ಆತನಿಗೆ ಸರಪಳಿ ಕಟ್ಟಿದವರು ಯಾರು? ಆತ ಅಲ್ಲಿಗೇಕೆ ಬಂದ ಎನ್ನುವ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.