ಗುಡಿಸಲಿನಲ್ಲಿ ಮಲಗಿದ್ದ ಹೆಣ್ಣುಮಗು ಹೊತ್ತೊಯ್ದ ದುರುಳರು

ಮೂರು ತಿಂಗಳ ಹಿಂದೆ ಸಕಲೇಶಪುರಕ್ಕೆ ಬಂದು‌ ಕೆಲಸಕ್ಕೆ ಸೇರಿದ್ದ ದಂಪತಿ

ಹಾಸನ: ಗುಡಿಸಲಿನಲ್ಲಿ ಮಲಗಿದ್ದ 14 ತಿಂಗಳ ಹೆಣ್ಣು ಮಗುವನ್ನು‌ ದುರುಳರು ಕದ್ದೊಯ್ದ ಘಟನೆ ಸಕಲೇಶಪುರ ತಾಲ್ಲೂಕಿನ, ಮಳಲಿ ಗ್ರಾಮದಲ್ಲಿ ನಡೆದಿದೆ.

ಮಳಲಿಯ ಇಟ್ಟಿಗೆ ಕಾರ್ಖಾನೆ ಕಾರ್ಮಿಕರಾದ ಮಧ್ಯಪ್ರದೇಶದ, ಸತ್ಮ ಜಿಲ್ಲೆ, ವೀರ್‌ಸಿಂಗ್‌ಪುರ್ ತಾಲ್ಲೂಕಿನ ಸಂಜು ಮತ್ತು ರೋಹಿತ್ ದಂಪತಿ ಪುತ್ರಿ ಕೀರ್ತಿ ಕಳುವಾದ ಮಗು.

ನಿನ್ನೆ ಸಂಜೆ ಕೆಲಸ ಮುಗಿಸಿದ ನಂತರ ನಾಲ್ಕು ವರ್ಷದ ಗಂಡುಮಗುವಿನೊಂದಿಗೆ ಹೆಣ್ಣು ಮಗುವನ್ನು ಗುಡಿಸಿಲಿನಲ್ಲಿ ಮಲಗಿಸಿ ಪಕ್ಕದಲ್ಲೇ ಇರುವ ಹೇಮಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ದಂಪತಿ ಹದಿನೈದು‌ ನಿಮಿಷಗಳ ನಂತರ ಹಿಂದಿರುಗಿ ನೋಡಿದಾಗ ಹೆಣ್ಣು ಮಗು ನಾಪತ್ತೆಯಾಗಿತ್ತು.

ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.