ಬುಧವಾರ ಬೆಳಗ್ಗೆ ವೇಳೆಗೆ ಹಾಸನಾಂಬ ದರ್ಶನದ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದಲೇ 5.5 ಕೋಟಿ ರೂ. ದಾಟಿದ ಆದಾಯ!

ಹಾಸನ: ನಗರದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಾರಿ ಭಕ್ತ ಸಾಗರವೇ ಹರಿದು ಬರುತ್ತಿರುವುದರಿಂದ ಕೇವಲ ಆರನೇ ದಿನದ ಆರಂಭದ ವೇಳೆಗೇ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದಲೇ 5.5 ಕೋಟಿ ರೂ. ದಾಖಲೆಯ ಆದಾಯ ಸಂಗ್ರಹವಾಗಿದೆ.

ಬುಧವಾರ ಬೆಳಗ್ಗೆ ಎಂಟು ಗಂಟೆವರೆಗೆ 300 ರೂ. 38530 ಟಿಕೆಟ್ ಗಳ ಮಾರಾಟದಿಂದ 1,15,59000ರೂ., 1000 ರೂ.ನ 40,925 ಟಿಕೆಟ್ ಗಳ ಮಾರಾಟದಿಂದ 4,09,25000 ರೂ., 68780‌ಲಾಡು ಪ್ರಸಾದ ಮಾರಾಟದಿಂದ 41,26,800ರೂ. ಆದಾಯ ಬಂದಿದೆ.

ಕೇವಲ ಟಿಕೆಟ್ ಹಾಗೂ‌ ಲಾಡು ಮಾರಾಟದಿಂದಲೇ ಒಟ್ಟು 5,66,10800ರೂ. ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಮಾರುತಿ ತಿಳಿಸಿದ್ದಾರೆ.