ಕೊಣನೂರು(ಅರಕಲಗೂಡು ತಾ.): ಹೋಬಳಿಯ ಬಿದರೂರು ಮೂಲದ ಯುವ ವಿಜ್ಞಾನಿ ಡಾ. ನಾಗರಾಜ್ ಬಸವೇಗೌಡ ಅವರು ಅಮೆರಿಕಾದ ಸ್ಕ್ಯಾ ನ್ ಪೋರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿ ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
11 ವರ್ಷಗಳಿಂದ ದಕ್ಷಿಣ ಕೊರಿಯಾದ ಯೆಯುಂಗ್ನಾಮ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರಾಗಿ ಕ್ಯಾನ್ಸರ್ ಔಷಧ ವಿತರಣೆ ಮತ್ತು ಸಂವೇದಕ ಅಪ್ಲಿಕೇಶನ್‌ಗಳಿಗೆ ನ್ಯಾನೊಮೆಟೀರಿಯಲ್‌ಗಳ ಕುರಿತು ತಮ್ಮ ಸಂಶೋಧನೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನಾಗರಾಜ್ ಬಸವೇಗೌಡ, ಮೂಲತಃ ಕೊಣನೂರು ಹೋಬಳಿಯ ಬಿದರೂರು ಗ್ರಾಮದವರಾಗಿದ್ದು, ಬಸವೇಗೌಡ ಮತ್ತು ಅಮ್ಮಯಮ್ಮ ದಂಪತಿಗಳ ಮಗ.
ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಟಕವಾದ ಸಂಶೋಧನಾ ಲೇಖನಗಳು, ಉಲ್ಲೇಖಗಳು, ಸಹ ಲೇಖಕರ ಸಂಶೋಧನಾ ಪ್ರಕಟಣೆಗಳು ಮತ್ತು ಎಚ್ಇಂಡೆಕ್ಸ್‌ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ.2 ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮಾಡಿದೆ.