ಬೆಂಗಳೂರು ಜ.27:ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿಂದು ಕನ್ನಡಾಂಬೆಯ 25 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಶಕ್ತಿಸೌಧ ಪಶ್ಚಿಮ ದ್ವಾರದಲ್ಲಿ ಅನಾವರಣಗೊಂಡಿರುವ ಪ್ರತಿಮೆಯು ನೆಲಮಟ್ಟದಿಂದ 43.6 ಅಡಿ ಎತ್ತರದಲ್ಲಿದ್ದು, ಒಟ್ಟು 31.50 ಟನ್ ತೂಕವಿದೆ. ಅದರಲ್ಲೂ ನಾಡದೇವತೆ ಭುವನೇಶ್ವರಿ ಪ್ರತಿಮೆ – 20 ಟನ್ ತೂಕದ್ದಾಗಿರುವಿರುವುದು ವಿಶೇಷ.
ನಾಡದೇವಿ ಪ್ರತಿಮೆಯ ಹಿಂದೆ ಇರುವ ಕರ್ನಾಟಕ ನಕ್ಷೆ 11.50 ಟನ್ ಆಗಿದ್ದು ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದೆ. ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ (ಉದ್ಯಾನವನ ಸೇರಿದಂತೆ) 4500 ಚ.ಮೀ ಹೊಂದಿದೆ.
ಕಲ್ಲು ಕಟ್ಟಡದ ಪೀಠವು ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಣ ಪಥದ ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಿಸಲಾಗಿದ್ದು, ಈ ಕಾಮಗಾರಿಯ ಅಂದಾಜು ವೆಚ್ಚ 21.24 ಕೋಟಿದ್ದಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಡಿಸಿಎಂ ಡಿ.ಕೆಶಿವಕುಮಾರ್, ಸಚಿವ ರಾಮಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ನಗರಾಭಿವೃದ್ಧಿ ಸಚಿವ ಸುರೇಶ ಬಿ.ಎಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.